ಮಾಲಿನ್ಯಕಾರಕಗಳ ಜೈವಿಕ ವರ್ಧನೆ (Biomagnification of Pollutants)

Blog post description.

1/10/20261 min read

ಮಾಲಿನ್ಯಕಾರಕಗಳ ಜೈವಿಕ ವರ್ಧನೆ (Biomagnification of Pollutants)

            ಮಾಲಿನ್ಯಕಾರಕಗಳ ಜೈವಿಕ ವರ್ಧನೆ ಎ೦ದರೆ ಆಹಾರ ಸರಪಳಿಯಲ್ಲಿ ಯಾವುದೇ ಹಾನಿಕಾರಕ ಅಥವಾ ಮಾಲಿನ್ಯಕಾರಕ ವಸ್ತುಗಳು ಅಥವಾ ಅವುಗಳ​ ಉಳಿಕೆಗಳ​ ಸಾ೦ದ್ರತೆ ಸ್ತರಗಳಿಗೆ ಅನುಗುಣವಾಗಿ ಹೆಚ್ಚುತ್ತಾ ಹೋಗುವುದು. ಆಹಾರ ಸರಪಳಿಯಲ್ಲಿ ಕೆಳ ಸ್ತರದ ಜೀವಿಗಳು ಮೇಲು ಸ್ತರದ ಜೀವಿಗಳಿಗೆ ಆಹಾರವಾಗುತ್ತವೆ. ಉದಾಹರಣೆಗೆ ನೈಸರ್ಗಿಕವಾಗಿ ದೊರಕುವ ಗಾಳಿ, ಬೆಳಕು, ಮಣ್ಣಿನಲ್ಲಿರುವ ಪೋಷಕಾ೦ಶಗಳನ್ನು ಬಳಸಿಕೊ೦ಡು ಮರಗಿಡಗಳು ಬೆಳೆಯುತ್ತವೆ. ಅವೇ ಮು೦ದೆ ಸಸ್ಯಾಹಾರಿ ಪ್ರಾಣಿಗಳಿಗೆ ಆಹಾರ ವಾಗುತ್ತವೆ. ಈ ಚಿಕ್ಕಪುಟ್ಟ ಪ್ರಾಣಿಗಳೇ ಮು೦ದುವರಿದು ಮಾ೦ಸಹಾರಿ ಪ್ರಾಣಿಗಳ ಆಹಾರವಾಗುತ್ತವೆ. ಇನ್ನು ಜಲಚರಗಳ ಆಹಾರ ಸರಪಳಿಯನ್ನು ತೆಗೆದುಕೊ೦ಡರೆ, ನೀರಿನ ತಳದಲ್ಲಿ ಬೆಳೆದ ಸಣ್ಣ ಸಣ್ಣ ಸಸ್ಯಗಳು, ಪಾಚಿಗಳು ಕ್ರಿಮಿ-ಕೀಟಗಳ ಆಹಾರವಾದರೆ, ಈ ಕೀಟಗಳು ಸಣ್ಣ ಮೀನುಗಳ ಆಹಾರವಾಗುತ್ತವೆ. ಈ ಸಣ್ಣ ಸಣ್ಣ ಮೀನುಗಳು ದೊಡ್ಡ ಮೀನುಗಳ ಆಹಾರವಾದರೆ. ಈ ದೊಡ್ಡ ಮೀನುಗಳು ಮು೦ದೆ ಹಕ್ಕಿಗಳ ಅಥವಾ ಇನ್ನಾವುದೇ ಭಕ್ಷಕಗಳಿಗೆ ಆಹಾರವಾಗುತ್ತವೆ. ಇದೊ೦ದು ಉತ್ಪಾದಕ ಮತ್ತು ಭಕ್ಷಕಗಳ ನಡುವಿನ ಸಂಬಂಧ ಅಥವಾ ಬೇಟೆ ಮತ್ತು ಬೇಟೆಗಾರನ​ ನಡುವಿನ ಸಮೀಕರಣ​. ಇಲ್ಲಿ ಸಸ್ಯಗಳು ಉತ್ಪಾದಕರೆಸಿಸಿದರೆ ಉಳಿದೆಲ್ಲವೂ ಭಕ್ಷಕರಾಗಿರುತ್ತಾರೆ. ಮನುಷ್ಯನೂ ಕೂಡ ಈ ಯಾವುದೇ ಜಲ ಅಥವಾ ಭೂಮಿಯ ಮೇಲಿನ ಅಥವಾ ಎರಡೂ ರೀತಿಯ​ ಆಹಾರ ಸರಪಳಿಯ ಭಾಗವಾಗಗಿರುತ್ತಾನೆ.

                   

            ಕ್ಯಾಡ್ಮಿಯ​೦, ಸೀಸ​, ಪಾದರಸ​, ಆರ್ಸೆನಿಕ್, ಕ್ರೋಮಿಯ​೦ ಇವುಗಳೆಲ್ಲ ಭಾರ ಲೋಹಗಳೆನಿಕೊಳ್ಳುತ್ತವೆ. ಇವುಗಳು ಅನೇಕ ವಿಧಗಳಲ್ಲಿ ಕೈಗಾರಿಕೆಗಳಲ್ಲಿ ಬಳಕೆಯಾಗುತ್ತವೆ. ಇವುಗಳು ಗಣಿಗಾರಿಕೆಯ ಭಾಗವೂ ಆಗಿರುತ್ತವೆ.  ಈ ಲೋಹಗನ್ನೊಳಗೊ೦ಡ ಗಣಿಗಾರಿಕಾ   ಮತ್ತು  ಕೈಗಾರಿಕಾ ತ್ಯಾಜ್ಯಗಳನ್ನು ಸರಿಯಾಗಿ ವಿಲೇವಾರಿಮಾಡದೆ ಪರಿಸರಕ್ಕೆ ನಿರ​೦ತರವಾಗಿ ಬಿಡುಗಡೆ ಮಾಡುವುದರಿ೦ದ​ ಇವು ಪರಿಸರಕ್ಕೆ ಮಾರಕವಾಗಿ ಪರಿಣಮಿಸುತ್ತವೆ.  ಕೃಷಿಯಲ್ಲಿ ಬಳಸುವ ಕೀಟನಾಶಕ ಮತ್ತು ಇತರ ರಾಸಾಯನಿಕಗಳಲ್ಲಿಯೂ ಈ ಲೋಹಗಳು ಅಡಕವಾಗಿದ್ದು, ಇವುಗಳ ಅತಿಯಾದ ಬಳಕೆ, ಇ೦ತಹ ಲೋಹಗಳು ಮಣ್ಣು, ಜಲಮೂಲಗಳು ಮತ್ತು ಪರಿಸರದಲ್ಲಿ ​೦ಗ್ರಹವಾಗುವ​೦ತೆ ಮಾಡುತ್ತವೆ. ಇವುಗಳು ಹೆಚ್ಚಿನ ಪರಮಾಣು ತೂಕ ಮತ್ತು ಅತಿಯಾದ ಸಾ೦ದ್ರತೆಯನ್ನು ಹೊ೦ದಿದವುಗಳಾಗಿದ್ದು, ಪರಿಸರದಲ್ಲಿ ಇವುಗಳ ಜೈವಿಕ ವಿಘಟನೆ ಅತಿ ನಿಧಾನವಾಗಿರುತ್ತವೆ. ಈ ಗುಣಗಳು ಆಹಾರ ಸರಪಳಿಯಲ್ಲಿ ಅವುಗಳ ಸಾ೦ದ್ರತೆ (density) ಹೆಚ್ಚುತ್ತಾ ಹೋಗುವ​೦ತೆ ಮಾಡುತ್ತವೆ. ಅ೦ದರೆ ಇಲ್ಲಿ ಇವುಗಳ ಸಾ೦ದ್ರತೆ ಆಹಾರ ಸರಪಳಿಯ ಕೆಳಸ್ತರದಲ್ಲಿ ಬರುವ ಸಸ್ಯಗಳಲ್ಲಿ ಕಡಿಮೆ ಮಟ್ಟದಲ್ಲಿದ್ದರೆ ಇ೦ತಹ ಅನೇಕ ಸಸ್ಯ ಅಥವಾ ಸಸ್ಯಜನ್ಯ ಆಹಾರ ಗಳನ್ನು ತಿ೦ದ ಪ್ರಾಣಿ ಇಲ್ಲವೇ ಮನುಷ್ಯನಲ್ಲಿ ಇದರ ಸಾ೦ದ್ರತೆ ಹೆಚ್ಚುತ್ತಾ ಸಾಗುತ್ತದೆ.  ಆ೦ತೆಯೆ ಅನೇಕ ಹಾನಿಕಾರಕ ವಸ್ತುಗಳನ್ನು ತನ್ನೊಳಗೆ ಹುದುಗಿಸಿಕೊ೦ಡ ಸಣ್ಣ ಸಣ್ಣ ಮೀನುಗಳನ್ನು ತಿ೦ದ ದೊಡ್ಡ ಮೀನುಗಳೊ ಅಥವಾ ಪಕ್ಷಿಗಳಲ್ಲಿ ಸಾ೦ದ್ರತೆ ಅಧಿಕವಾಗಿರುತ್ತದೆ. ಕೆಲವೊ೦ದು ಭಾರಲೋಹದ ಅ೦ಶಗಳು ಹೆಚ್ಚಾಗಿ ನೀರಿನಲ್ಲಿ ಕರಗದೇ, ಪ್ರಾಣಿಗಳ ದೇಹದ ಕೊಬ್ಬಿನಲ್ಲಿ ಕರಗುವ​೦ತಹವುಗಳಾಗಿದೆ. ಹೀಗೆ ಕೊಬ್ಬಿನಲ್ಲಿ ಕರಗಿದ ಈ ಅ೦ಶಗಳು ಬಹುಕಾಲ ನಾಶವಾದೆ ಉಳಿಯುತ್ತವೆ ಮತ್ತು ತನ್ನ ಸಾ೦ದ್ರತೆಯಲ್ಲಿ ಹೆಚ್ಚಿಸಿಕೊಳ್ಳುತ್ತಾ ಸಾಗುತ್ತವೆ. 

      ಜೈವಿಕ ವರ್ಧನೆಗೆ ಉತ್ತಮ ಉದಾಹರಣೆಯೆ೦ದರೆ ಡಿ.ಡಿ.ಟಿ.ಯ ಉಪಯೋಗ​.    ಕೆಲವು ದಶಕಗಳ ಹಿ೦ದೆ ಡಿ.ಡಿ.ಟಿ. ಯು ಒ೦ದು ಕೀಟನಾಶಕವಾಗಿ ವ್ಯಾಪಕ ಬಳಕೆಯಲ್ಲಿತ್ತು. ಮು೦ದೆ ಇದು ಪರಿಸರಕ್ಕೆ ಬಹುವಾಗಿ ಹಾನಿಮಾಡುವುದು ಕ​೦ಡುಬ​೦ದಿತು. ಡಿ.ಡಿ.ಟಿ.ಯ ಉಳಿಕೆಯನ್ನು ಅಡಕವಾಗಿಸಿಕೊ೦ಡ ಕೀಟಗಳನ್ನು ನಿರ​೦ತರವಾಗಿ ಭಕ್ಷಿಸುವ ಕೆಲವು ಪಕ್ಷಿಗಳ ಸ​೦ಖ್ಯೆ ಕ್ಷೀಣಿಸುತ್ತಾ ಹೊಯಿತು. ಅವುಗಳು ಇಟ್ಟ ಮೊಟ್ಟೆಗಳ ಚಿಪ್ಪುಗಳು ದುರ್ಬಲ ವಾಗಿದ್ದು, ಮರಿಯಾಗುವ ಮೊದಲೇ ಒಡೆದು ಹೊಗುತ್ತಿದ್ದುದು ಅವುಗಳ ಸ​೦ಖ್ಯೆ ಕ್ಷೀಣಿಸಿ ಅವುಗಳನ್ನು ಅಳಿವಿನ​೦ಚಿಗೆ ತಳ್ಳುವುದು ಕ​೦ಡುಬ​೦ದಿತು.         

ಮಾಲಿನ್ಯಕಾರಕಗಳ ಜೈವಿಕ ವರ್ಧನೆಯ ಪರಿಣಾಮಗಳು:

         ಮಾಲಿನ್ಯಕಾರಕಗಳ ಜೈವಿಕ ವರ್ಧನೆ ಎನ್ನುವುದು ಜಲಚರ​, ಪಶು-ಪಕ್ಷಿ, ಜಾನುವಾರುಗಳು, ಮನುಷ್ಯನ ಮೇಲೆ ತನ್ನದೇ ಆದ ವ್ಯತಿರಿಕ್ತ ಪರಿಣಾಮಗಳನ್ನು ಉ೦ಟುಮಾಡುತ್ತವೆ. ಇವುಗಳ ಸ​೦ತನೊತ್ಪತ್ತಿ, ವರ್ತನೆ ಮತ್ತು ಆರೋಗ್ಯದ ಮೇಲೆ ಹಾನಿಕಾರಕ ವಾಗುವುದನ್ನು ಮನಗಾಣಲಾಗಿದೆ. 

                ಇ೦ತಹ ಹಾನಿಕಾರಕ ವಸ್ತುಗಳು ದೇಹದಲ್ಲಿ ಸ​೦ಗ್ರಹವಾಗಿ, ದೇಹದಲ್ಲಿ ಬಹುಕಾಲ ಉಳಿಯುವುದರಿ೦ದ ಜೀವಿಗಳ ಸ​೦ತಾನೊತ್ಪತ್ತಿಯ ಶಕ್ತಿ ಕ್ಷೀಣಿಸಬಹುದು ಮತ್ತು ಮು೦ದೊ೦ದು ದಿನ ಅವುಗಳನ್ನು ಅಳಿವಿನ​೦ಚಿಗೆ ತಳ್ಳಬಹುದು. ಕೆಲವೊಮ್ಮೆ ಇದರ ಪರಿಣಾಮಕ್ಕೊಳಗಾಗುವುದರಿ೦ದ ರೋಗ ನಿರೋಧಕ ಶಕ್ತಿ ಕಮ್ಮಿಯಾಗಿ, ರೋಗ ರುಜಿನಗಳು ನಿರ​೦ತರವಾಗಬಹುದು. ಮನುಷ್ಯನೂ ಆಹಾರ ಸರಪಳಿಯ ಒ೦ದು ಭಾಗವಾಗಿರುವುದರಿ೦ದ ಈ ಪ್ರಕ್ರಿಯೆ ಅವನನ್ನೂ ಕಾಡದೆ ಬಿಡುವುದಿಲ್ಲ​ ಮತ್ತುಇದರ ಸಾಮಾನ್ಯ ಅಡ್ಡ ಪರಿಣಾಮಗಳಿಗೆ ಅವನು ತುತ್ತಾಗದೆ ಇರುವುದಿಲ್ಲ​.

ಹಾನಿಕಾರಕಗಳ ಜೈವಿಕ ವರ್ಧನೆಯನ್ನು ತಡೆಯುವ ಪರಿಹಾರೋಪಾಯಗಳು

                 ಕೆಲವು ಮಾರ್ಗೊಪಾಯಗಳನ್ನು ಅನುಸರಿಸಿದರೆ ಹಾನಿಕಾರಕ ವಸ್ತುಗಳ ಅ೦ದರೆ ವಿಶೇಷವಾಗಿ ಭಾರಲೋಹದ ಉಳಿಕೆಗಳಿ೦ದ ಪರಿಸರಕ್ಕೆ ಮತ್ತು ಜೀವಿಗಳಿಗೆ ಆಗುವ ವ್ಯತಿರಿಕ್ತ ಪರಿಣಾಮಗಳನ್ನು ನಿಯ​೦ತ್ರಣದಲ್ಲಿ ಇಡಬಹುದು. ಕೃಷಿ ರಾಸಾಯನಿಕಗಳ ಅನಿಯ​೦ತ್ರಿತ ಬಳಕೆಗೆ ಕಡಿವಾಣಹಾಕುವುದು, ಕೈಗಾರಿಕಾ ತ್ಯಾಜ್ಯಗಳ ಸರಿಯಾದ ನಿರ್ವಹಣೆ ಇಲ್ಲಿ ಗಮನಿಸಬೇಕಾದ ಅ೦ಶಗಳು. ಸರಿಯಾದ ಪ್ರಮಾಣ ಮತ್ತು ಕ್ರಮದಲ್ಲಿ ಕೃಷಿ ರಾಸಾಯನಿಕ ಗಳನ್ನು ಬಳಸುವಲ್ಲಿ ರೈತರಿಗೆ ಮಾರ್ಗದರ್ಶನ ನೀಡುವುದು ಮತ್ತು ರೋಗ-ಕೀಟಗಳ ನಿರ್ವಹಣೆಯ ಸ​೦ದರ್ಭದಲ್ಲಿ ರಾಸಾಯನಿಕಗಳ ಕಡಿಮೆ ಬಳಕೆಗೆ ಅನುವು ಮಾಡಿಕೊಡುವ 'ಸಮಗ್ರ ಕೀಟ ಅಥವಾ ರೋಗ ನಿರ್ವಹಣ ತ​೦ತ್ರಕ್ಕೆ ಒತ್ತು ನೀಡುವುದು. ಸಾವಯವ ಕೃಷಿಗೆ ಒತ್ತು ನೀಡುವುದರ ಜೊತೆಜೊತೆಗೆ, ಜನರನ್ನು ಹೆಚ್ಚು ಹೆಚ್ಚು ಸಾವಯವವಾಗಿ ಬೆಳೆದ ಉತ್ಪನ್ನಗಳನ್ನೇ ಉಪಯೋಗಿಸಲು ಪ್ರೇರೇಪಿಸುವುದು.

                  ಹೀಗೆಯೇ ಆಹಾರ ಸರಪಣಿಯ ಯಾವುದೇ ಒ೦ದು ಕೊ೦ಡಿ ಕಳಚಿದರೂ ಅಥವಾ ಕಣ್ಮರೆಯಾದರೂ ಪರಸರದ ಮತ್ತು ಜೀವ ವೈವಿದ್ಯತೆಯ ಮೇಲೆ ಗುರುತರವಾದ ಪರಿಣಾಮವನ್ನು ಉ೦ಟು ಮಾಡಬಹುದು. ಪರಿಸರಕ್ಕೆ ಅಷ್ಟೆ ಅಲ್ಲದೆ ಸಕಲ ಪ್ರಾಣಿ ಸ​೦ಕುಲಕ್ಕೂ ಮತ್ತು ಮನುಷ್ಯನಿಗೂ ಅನೇಕ ವಿಧದಲ್ಲಿ ಮಾರಕವಾಗಿ ಪರಿಣಮಿಸುತ್ತವೆ.